ಅಯೋಧ್ಯೆಯಲ್ಲಿ ಕರ್ನಾಟಕ ಕಾವೇರಿ ಕರಕುಶಲ ಮಳಿಗೆ ಸ್ಥಾಪನೆ: : ಡಾ. ಬೇಳೂರು ರಾಘವೇಂದ್ರ ಶೆಟ್ಟಿ
ಡೆಲ್ಲಿ ಡಿ26 : ಜಗತ್ತಿನ ಗಮನ ಸೆಳೆದಿರುವ ಅಯೋಧ್ಯೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಪಾರಂಪರಿಕ ತಾಣಗಳನ್ನು ಪ್ರತಿಬಿಂಬಿಸುವ ಕರ್ನಾಟಕ ಕಾವೇರಿ ಕರಕುಶಲ ಮಳಿಗೆ ಸ್ಥಾಪಿಸಲು ಕರ್ನಾಟಕ ಕರಕುಶಲ ನಿಗಮ ತೀರ್ಮಾನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ದೆಹಲಿಯಲ್ಲಿ ಮಾತನಾಡಿದ ಇಂದಿಗೆ 1ತಿಂಗಳು ಪೂರೈಸಿದ್ದು ಕರಕುಶಲ ನಿಗಮ ಮಂಡಳಿ ಅಧ್ಯಕ್ಷರಾಗಿ ಈ ವೇಳೆ ಹದಿನೈದಕ್ಕೂ ಹೆಚ್ಚು ವಿನೂತನ ಕಾರ್ಯಕ್ರಮಗಳು ಯೋಜನೆಯನ್ನು ಜಾರಿಗೆ ತರಲಾಗುತ್ತದೆ.
ದೆಹಲಿಯ ಕಾವೇರಿ ಎಂಪೋರಿಯಂನಲ್ಲಿ ವಿನೂತನ ಶೈಲಿಯ ಪೀಠೋಪಕರಣಗಳು ಆಧುನಿಕತೆಯಿಂದ ಕೂಡಿದಂತಹ ಕಲಾಕೃತಿಗಳನ್ನು ಇರಿಸುವ ಬಗ್ಗೆ ಪ್ರಸ್ತಾಪಿಸಿದ್ದರೂ ಹಾಗೂ ಈ ವೇಳೆ ಆಟೋಮೊಬೈಲ್ ವಾಹನವನ್ನು ಬಿಡುಗಡೆ ಮಾಡುವುದರ ಬಗ್ಗೆ ಪ್ರಸ್ತಾಪಿಸಿದರು.ದೆಹಲಿಯಲ್ಲಿ ನೂತನ ಮಳಿಗೆ ಪ್ರಾರಂಭದ ಕುರಿತು ತಿಳಿಸಿದರು. ಈ ವೇಳೆ ಉಪಸ್ಥಿತರಿದ್ದ ಕಾವೇರಿ ಎಂಪೋರಿಯಮ್ ನ ಜನರಲ್ ಮ್ಯಾನೇಜರ್ ಅಶುತೋಷ ಭಾರದ್ವಾಜ್ ಹಾಗೂ ಬಿಜೆಪಿ ಪ್ರಮುಖ ಮುಖಂಡ ಡಾ. ವೆಂಕಟೇಶ್ ಮೌರ್ಯ ಪಿ ಉಪಸ್ಥಿತರಿದ್ದರು
ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷರಾಗಿ ಕಳೆದ ಒಂದು ತಿಂಗಳಲ್ಲಿ ಕೈಗೊಂಡ ಹದಿನೈದು ಯೋಜನೆಗಳ ತೀರ್ಮಾನಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಸುದೀರ್ಘ ಸಮಾಲೋಚನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಪ್ರಮುಖವಾಗಿ ಅಯೋಧ್ಯೆಯಲ್ಲಿ ಕಾವೇರಿ ಕರಕುಶಲ ನಿಗಮ ಸ್ಥಾಪಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ. ಅಯೋಧ್ಯೆಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ನಿಗಮದಲ್ಲಿ ತಯಾರಾದ “ ಕೋದಂಡರಾಮ” ಕಲಾ ಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿತ್ತು. ಇದಾದ ಬಳಿಕ ಇದೇ ಮಾದರಿಯ 200 ಕ್ಕೂ ಹೆಚ್ಚು ಕಲಾಕೃತಿಗಳಿಗೆ ಬೇಡಿಕೆ ಬಂದಿದೆ. ಜತೆಗೆ ರಾಜ್ಯದ ವಿಶ್ವವಿಖ್ಯಾತ ಹಂಪಿ, ಮೈಸೂರು ಅರಮನೆ, ಬಾದಾಮಿ, ಐಹೋಳೆ, ಪಟ್ಟದ ಕಲ್ ಮತ್ತಿತರ ಕಲಾಕೃತಿಗಳಿಗೂ ಬೇಡಿಕೆ ಇದೆ. ಹೀಗಾಗಿ ಅಯೋಧ್ಯೆ ಮತ್ತಿತರ ಕಡೆಗಳಲ್ಲಿ ಮಳಿಗೆ ಸ್ಥಾಪಿಸುವ ನಿಗಮದ ಪ್ರಸ್ತಾವನೆಗೆ ಮುಖ್ಯಮಂತ್ರಿ ಅವರು ಅನುಮೋದನೆ ನೀಡಿದ್ದಾರೆ ಎಂದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ಅಯೋಧ್ಯೆ ಜತೆಗೆ ತಿರುಪತಿ, ಶಿರಡಿ, ಉಡುಪಿ, ಪುಣೆ ಸೇರಿ ದೇಶದ 10 ಕಡೆಗಳಲ್ಲಿ ನಿಗಮದ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಜತೆಗೆ ಕರಕುಶಲ ವಸ್ತುಗಳ ಬೇಡಿಕೆ ಹೆಚ್ಚಿಸಲು ಸಂಚಾರಿ ವಾಹನಗಳ ಮೂಲಕ ಮಾರಾಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಆನ್ ಲೈನ್ ಮೂಲಕ ಮಾರಾಟ, ಡಿಜಿಟಲ್ ಮಾರುಕಟ್ಟೆ, ಬ್ರಾಂಡಿಂಗ್ ಮಾರಾಟವನ್ನು ಉತ್ತೇಜಿಸಲಾಗುವುದು ಎಂದರು.
ಕರಕುಶಲ ವಸ್ತುಗಳ ಮಾರುಕಟ್ಟೆ ಗೆ ಹೈಟೆಕ್ ಹೊಸ ಸ್ಪರ್ಷ ನೀಡಲು ಉದ್ದೇಶಿಸಿದ್ದು, ಇದಕ್ಕೆ ಇಂದಿನ ಕಾಲ ಘಟ್ಟಕ್ಕೆ ಅನುಗುಣವಾಗಿ ಕರಕುಶಲ ಕಲೆಗೆ ಹೊಸ ಸ್ವರೂಪ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಗೃಹ ಬಳಕೆಯ ಡೈನಿಂಗ್ ಟೇಬಲ್ ಗಳು, ಗೃಹೋಪಯೋಗಿ ವಸ್ತುಗಳನ್ನು ಈವತ್ತಿನ ಶೈಲಿಗೆ ಪೂರಕವಾಗಿ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಇಡೀ ದೇಶದ ಕಲೆಗಳ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಕರಕುಶಲತೆಗೆ ಹೊಸತನ ತರಲಾಗುವುದು ಎಂದರು.
ಕರಕುಶ ಅಭಿವೃದ್ಧಿ ನಿಗಮದಲ್ಲಿ 15 ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಕರಕುಶಲ ಕರ್ಮಿಗಳಿಗೆ ಹಂಚಿರುವ ವಸತಿ ಕಾರ್ಯಾಗಾರಗಳ ಹಕ್ಕುಪತ್ರ ವಿತರಣೆ, ಕುಶಲ ಕರ್ಮಿಗಳ ತಾಣಗಳನ್ನು ಗುರುತಿಸಿ ಗುಕುಲದಂತಹ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಕಲಾ ಸಂಕಿರ್ಣಗಳನ್ನು ಸ್ಥಾಪಿಸಲಾಗುವುದು. ಕಚ್ಚಾ ವಸ್ತುಗಳ ಪೂರೈಕೆ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಬೀಟೆ ಮರದ ಪೀಠೋಪಕರಣ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಶಿವಮೊಗ್ಗ ಮತ್ತು ಸಾಗರದಲ್ಲಿ ಶ್ರೀಗಂಧದ ಕಲಾ ಸಂಕಿರ್ಣಗಳನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು.
ಚೆನ್ನಪಟ್ಟಣದ ಆಟಿಕೆಗಳು ಮತ್ತು ಬೀಟೆ ಮರದ ಕುಂದಣ ಕಲೆಯಲ್ಲಿ ಗುರುಕುಲ ಮಾದರಿ ಶಿಕ್ಷಣ ನೀಡಲು ಚೆನ್ನಪಟ್ಟಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ನಿಗಮದ ಮಾರಾಟ ಮಳಿಗೆಗಳಲ್ಲಿ ಶಿಸ್ತು ಮೂಡಿಸಲು ಆದ್ಯತೆ ನೀಡುವ ಜತೆಗೆ, ಕರಕುಶಲ ವಸ್ತುಗಳ ಕೇಂದ್ರೀಕೃತ ಉಗ್ರಾಣ ಸ್ಥಾಪನೆ, ಗಣಕೀಕೃತ ವ್ಯವಸ್ಥೆ ಕಲ್ಪಿಸುವ, ಸಿಸಿಟಿವಿ ಅಳವಡಿಕೆಗೆ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನಿಗಮ ಕೈಗೊಂಡಿರುವ ಕ್ರಮಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಗಮದ ಅಭಿವೃದ್ಧಿಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಆದಷ್ಟು ಶೀಘ್ರದಲ್ಲೇ ಮಾಡುವಂತೆ ಸಲಹೆ ಮಾಡಿದ್ದಾರೆ ಎಂದು ಡಾ.ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.